Yakub Koyyur

Yakub Koyyur is an eminent and dynamic mathematics teacher..


                                 


       ಯಾಕೂಬ್ ಎಂದೊಡನೆಯೇ ನಮ್ಮ ಮನದಲ್ಲಿ ಮೂಡುವ ಭಾವನೆಯೇ ಗಣಿತ. ಯಾಕೂಬ್ ಗಣಿತ ವಿಷಯದಲ್ಲಿ ಅಪಾರ ಸಾಧನೆ ಮಾಡುವ ಮೂಲಕ ಶಿಕ್ಷಕ ಹಾಗೂ ವಿದ್ಯಾರ್ಥಿ ಸಮುದಾಯದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ಮಕ್ಕಳಿಗೆ ಗಣಿತ ವಿಷಯವನ್ನು ಆಪ್ತವಾಗಿಸುವ ದಿಕ್ಕಿನಲ್ಲಿ ನಡೆದು ಎಲ್ಲರ ಪಾಲಿನ ಮೆಚ್ಚಿನ ಶಿಕ್ಷಕರಾಗಿದ್ದಾರೆ.

ಇವರು ಬೆಳ್ತಂಗಡಿ ತಾಲ್ಲೂಕಿನ ನಡ ಎಂಬ ಗ್ರಾಮದಲ್ಲಿ ಸುಮಾರು 19 ವರ್ಷಗಳಿಂದ ಗಣಿತ ಶಿಕ್ಷಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ತನ್ನ ಜೀವದಷ್ಟೇ ಗಣಿತ ವಿಷಯವನ್ನು ಪ್ರೀತಿಸುವ ಇವರ ಒತ್ತಾಸೆಗಳಿಗೆ ಬೆನ್ನೆಲುಬಾಗಿ ನಿಂತವರು ಇವರ ಮಡದಿ ಹಾಗೂ ಶಾಲಾ ಹಿರಿಯ ವಿದ್ಯಾರ್ಥಿಗಳು ಹಾಗೂ ಊರ ನಾಗರೀಕರು. ನಮಗೆ ತಿಳಿದಿರುವಂತೆ ವಿಜ್ಞಾನ ಕಲಿಕೆಗೆ ಪ್ರಯೋಗಶಾಲೆ ಇರುವುದನ್ನು ನಾವು ನೋಡಿದ್ದೇವೆ. ಆದರೆ ಗಣಿತ ವಿಷಯಕ್ಕೊಂದು ಸುಸಜ್ಜಿತ, ಆಧುನಿಕ ಹಾಗೂ ಅದ್ಭುತ ಗಣಿತ ಪ್ರಯೋಗ ಶಾಲೆಯನ್ನು ರಾಜ್ಯಕ್ಕೇ ಮಾದರಿ ಎನಿಸುವಂತೆ ಸರ್ಕಾರಿ ಪ್ರೌಢಶಾಲೆಯಲ್ಲಿ ನಿರ್ಮಿಸಿರುವುದು ಇವರ ಬಹು ದೊಡ್ಡ ಹೆಗ್ಗಳಿಕೆ.

ಇಂದಿನ ಚಟುವಟಿಕೆ ಆಧಾರಿತ ಶಿಕ್ಷಣಕ್ಕೆ ಇಂಬು ಕೊಡುವಂತೆ ನಾಗರೀಕರ, ಹಿರಿಯ ವಿದ್ಯಾರ್ಥಿಗಳ ದೇಣಿಗೆ ಹಾಗೂ ಸಹಕಾರದ ಫಲವಾಗಿ ಸುಮಾರು 12 ಲಕ್ಷಗಳ ಹಣ ಹಾಗೂ ಮೂರು ವರ್ಷಗಳ ಸತತ ಪರಿಶ್ರಮದ ಪ್ರತೀಕವಾಗಿ ಯಾಕೂಬ್‌ರ ಕನಸಿನ ಕೂಸಾದ ಗಣಿತ ಪ್ರಯೋಗ ಶಾಲೆ ತಲೆಯೆತ್ತಿದೆ. ಈ ಗಣಿತ ಪ್ರಯೋಗ ಶಾಲೆಯಲ್ಲಿ ಕಣ್ಣು ಹಾಯಿಸಿದರೆ ಸಾಕು ಗಣಿತಜ್ಞರ ಭಾವಚಿತ್ರಗಳು, ಅಂಕಗಣಿತ, ಬೀಜಗಣಿತ, ರೇಖಾಗಣಿತಕ್ಕೆ ಸಂಬಂಧಿಸಿದ ವಿವಿಧ ಮಾದರಿಗಳು, LED TV, ಮಕ್ಕಳಿಗೆ ಚಟುವಟಿಕೆ ಮೂಲಕ ಕಲಿಯಲು ಅಗತ್ಯ ಪೀಠೋಪಕರಣಗಳು, ಗ್ರಂಥಾಲಯ ಕಾಣಿಸುತ್ತದೆ. ಅಷ್ಟೇ ಅಲ್ಲದೇ eyeris device ಎನ್ನುವ ಅತ್ಯಾಧುನಿಕ ತಂತ್ರಜ್ಞಾನದ ಸಹಾಯದಿಂದ ಗ್ರಾಮೀಣ ಮಕ್ಕಳಿಗೆ ಗಣಿತ ಕಲಿಸುತ್ತಿದ್ದಾರೆ ಈ ನಮ್ಮ ಯಾಕೂಬ್ ಮೇಷ್ಟ್ರು. ಗಣಿತ ಬೋಧನೆಗೆ ಕಂಪ್ಯೂಟರ್, ಪ್ರೊಜೆಕ್ಟರ್, ಇಂಟರ್‌ನೆಟ್ ಸಂಪರ್ಕ ಮುಂತಾದ ಆಧುನಿಕ ಉಪಕರಣ ಹಾಗೂ ತಂತ್ರಜ್ಞಾನದ ಬಳಕೆಯೂ ಈ ಗಣಿತ ಪ್ರಯೋಗಶಾಲೆಯಲ್ಲಿದೆ. ಮಕ್ಕಳಲ್ಲಿ ಗಣಿತ ಪ್ರೀತಿಯನ್ನು ಮೂಡಿಸಲು ಶಾಲಾ ಕೈ ತೋಟದಲ್ಲಿ ಗಣಿತಾಕೃತಿಗಳ ಗಣಿತ ತೋಟ ನಿರ್ಮಿಸಿದ್ದಾರೆ. ಗಣಿತದೆಡೆಗಿನ ಇವರ ಆಸಕ್ತಿ, ಜ್ಞಾನ ಮತ್ತು ಕಳಕಳಿ ಅದಮ್ಯ ಹಾಗೂ ಅನುಕರಣೀಯ.

ಯಾಕೂಬ್ ಅವರ ಯಶೋಗಾಥೆ ಇಷ್ಟಕ್ಕೇ ನಿಲ್ಲುವುದಿಲ್ಲ. ಹತ್ತನೆಯ ತರಗತಿಯ ಗಣಿತ ವಿಷಯದ ನೋಟ್ಸ್‌ಗಳನ್ನು ಅತ್ಯಾಕರ್ಷಕವಾಗಿರುವಂತೆ, ಉತ್ತಮ ಗುಣಮಟ್ಟದಿಂದ ಕೂಡಿರುವಂತೆ ತಯಾರಿಸಿ ಗಣಿತ ಹಾಗೂ ವಿಜ್ಞಾನ ಶಿಕ್ಷಕರಿಗೆಂದೇ ಸ್ಥಾಪಿತವಾದ ವಿಷಯ ಶಿಕ್ಷಕರ ಕೂಟ (Subject Teacher Forum) ಗಳಲ್ಲಿ ಶೇರ್ ಮಾಡಿದ್ದಾರೆ. ಅಲ್ಲದೇ ತಮ್ಮ ಪರಿಶ್ರಮದಿಂದ ತಯಾರಿಸಿದ ಈ ನೋಟ್ಸ್‌ಗಳನ್ನು ಸಾಧ್ಯವಾದಷ್ಟು ಶಿಕ್ಷಕರಿಗೆ ಲಭ್ಯವಾಗುವಂತೆ ಸಾಮಾಜಿಕ ಜಾಲ ತಾಣಗಳಾದ ವಾಟ್ಸ್‌ಆಪ್, ಹೈಕ್ ಗ್ರೂಪ್‌ಗಳಲ್ಲಿ ಶೇರ್ ಮಾಡಿದ್ದಾರೆ. ಅಲ್ಲದೇ ಮಕ್ಕಳಿಗೆ ಗಣಿತವನ್ನು ಇನ್ನಷ್ಟು ಆಪ್ಯಾಯಮಾನವಾಗಿಸುವ ದೃಷ್ಟಿಯಿಂದ ಉತ್ತಮ ಗಣಿತ ವೀಡಿಯೋಗಳನ್ನು ತಯಾರಿಸಿ ಅವುಗಳನ್ನು ಬಳಸಲು ಸಹಕರಿಸಿದ್ದಾರೆ. S.S.L.C ಮಕ್ಕಳಿಗೆ ಸುಲಭವಾಗಿ ಅಂಕ ಗಳಿಸಲು ಅನುಕೂಲವಾಗುವಂತೆ ನೋಟ್ಸ್‌ಗಳನ್ನು ತಯಾರಿಸುವುದರ ಮೂಲಕ ನೆರವಾಗಿದ್ದಾರೆ. ಈ ಎಲ್ಲಾ ರೀತಿಯ ನೋಟ್ಸ್‌ಗಳ ಉಪಯೋಗವನ್ನು ರಾಜ್ಯಾದ್ಯಾಂತ ಶಿಕ್ಷಕ ಹಾಗೂ ವಿದ್ಯಾರ್ಥಿ ಸಮುದಾಯ ಪಡೆದಿದೆ.

ಒಟ್ಟಿನಲ್ಲಿ ಒಬ್ಬ ಶಿಕ್ಷಕ ಮನಸ್ಸು ಮಾಡಿದರೆ ಏನೆಲ್ಲಾ ಸಾಧಿಸಬಹುದು ಹಾಗೂ ಯಾವೆಲ್ಲಾ ರೀತಿ ಬೋಧಿಸಲು ಪ್ರಯತ್ನಿಸಬಹುದು ಎಂಬುದಕ್ಕೆ ಯಾಕೂಬ್‌ರವರೇ ಸಾಕ್ಷಿ. ಎಷ್ಟೋ ಗಣಿತ ಶಿಕ್ಷಕರಿಗೆ ಗಣಿತ ಪ್ರಯೋಗಾಲಯ ಸ್ಥಾಪಿಸಲು ಪ್ರೇರಕರಾಗಿ, ಗಣಿತ ಬೋಧನೆಯಲ್ಲಿ ಸ್ಮಾರ್ಟ್ ಕ್ಲಾಸ್ ಅಳವಡಿಸಲು ಇವರು ದಾರಿದೀಪವಾಗಿದ್ದಾರೆ.
Videos
1.
2. 
3. SSLC Mathematics in Kannada Medium


4. SSLC Target 50 Mathematics - Kannada

SSLC NOTES (PDF Files) ಕನ್ನಡ ಮಾಧ್ಯಮ
1.  
2. 
3. 
4. 
5. 
6. 
7. 
8. 
9. 
10. 
11. 
12. 
13. 
14. 
15. 

SSLC NOTES (PDF Files) English Medium
1.  
2. 
3. 
4. 
5. 
6. 
7. 
8. 
9. 
10. 
11. 
12. 
13. 
14. 
15. 

Be a Perfect Teacher
1. Part-1  2.Part-2  3. Part-3  4. Part-4